11001 |
S. A. P. H. S. Agalpady |
11002 |
G. H. S. S. Kasaragod |
11003 |
Govt.Muslim V.H.S.S. Kasaragod |
11005 |
B. E. M. H. S. Kasaragod |
11006 |
G. V . H. S. S. For Girls Kasaragod |
11007 |
S. A.T. H. S. Manjeshwar |
11008 |
Udaya E. M. H. S. S. Udayanagar, Manjeshwar |
11009 |
G. V. H. S. S. Kunjathur |
11010 |
S. V. V. H. S. Miyapadavu |
11011 |
S. V. V. H. S. Kodlamogaru |
11012 |
K.V.S.M. H.S. Kurudapadavu |
11013 |
G. H. S. S. Mangalpady |
11014 |
G. H. S. S. Shiriya |
11015 |
G. H. S. S. Uppala |
11016 |
G. H. S. S. Bangra Manjeshwar |
11017 |
G. H. S. Paivalike |
11018 |
G. H.S. S. Paivalike Nagar |
11019 |
G.H.S.S. Bekur |
11020 |
G. H. S. S. Kumbla |
11021 |
T. I. H. S. S. Naimarmoola |
11022 |
G. H. S. S. Alampady |
11024 |
G. H. S. S. Cherkala Central |
11025 |
G. V. H. S. S. Iriyanni |
11026 |
B. A. R. H. S. S. Bovikan |
11027 |
G. H. S. Bandadka |
11028 |
G. H. S. S. Mogralputhur |
11029 |
G. V. H. S. S. Mogral |
11030 |
G. H. S. S. Adoor |
11031 |
G. H. S. Pandy |
11032 |
G. V. H. S. S. Delampady |
11033 |
G. H. S. S. Angadimoger |
11034 |
G. H. S. S. Padre |
11035 |
S. N. H. S. Perla |
11036 |
S. S. H. S. S. Katukukke |
11037 |
S. S. H. S. Sheni |
11038 |
N. H. S. Perdala |
11039 |
M. S. C. H. S. Perdala Neerchal |
11040 |
H. H. S. I. B. S. H.S.S. Edneer |
11041 |
G. H. S. S. Edneer |
11042 |
G. H. S. S. Adhur |
11043 |
G. V. H. S. S. Mulleria |
11044 |
G. V. H. S. S. Karadka |
11045 |
G. H. S. S. Belluru |
11046 |
G. H. S. S. Chemnad |
11047 |
C.J. H.S.S. Chemnad |
11048 |
S. G. K. H. S. Kudlu |
11049 |
G. H. S. S. Patla |
11050 |
G. H. S. S. Chandragiri |
11051 |
S. D. P. H. S. Dharmathadka |
11052 |
G. H. S. S. Heroor Meepry |
11053 |
C. H. S. S. Chattanchal |
11054 |
GOVT. H.S.S KUNDAMKUZHY |
11055 |
G. H. S. S. Bethurpara |
11056 |
G M. R. H. S. For Girls Kasaragod |
11057 |
N. A. Girls H. S. S. Eruthumkadavu |
11058 |
N. A. Model H. S. Naimarmoola |
11059 |
Sirajul Huda E. M. H. S. Udyawar |
11060 |
P. B. M. E. H. S. S. Nellikkatta |
11061 |
Dakeerath E.M. H. S. S. Thalangara |
11063 |
K H J H. S. S. Kalanad |
11064 |
Kunjar H. S. Kunjar |
11065 |
M I C H. S. S. Chattanchal |
11066 |
MUHIMMATH H S ,MUHIMMATH NAGAR |
11067 |
GHS KADAMBAR |
11068 |
GHS MOODAMBAIL |
11069 |
GHS PERDALA |
11070 |
GHS KODIYAMME |
11071 |
GHS UDAYAWAR |
11072 |
GHS KOLATHUR |
11073 |
GHS MUNNAD |
11074 |
G.H.S.Kuttikkol |
11484 |
G.H.S.Soorambail |
11701 |
T.I.T.T.C Naimarmoola |
pls remind the schools who already participated in bog I phase training, to register/ update their blogs. (as a flash news)
ReplyDelete.---- sanjeeva marikke, ghss paivalike
ಮಾನ್ಯ ಜಿಲ್ಲಾ ವಿದ್ಯಾಧಿಕಾರಿಯವರಲ್ಲಿ ವಿನಂತಿ. ತಮ್ಮ ಆದೇಶದ ಪ್ರಕಾರ ಯಾವಯಾವ ಕನ್ನಡಶಾಲೆಗಳು ದಸರಾ ನಾಡಹಬ್ಬವನ್ನು ಆಚರಿಸಿವೆ, ಹೇಗೆ ಆಚರಿಸಿವೆ, ಆಚರಿಸದಿದ್ದರೆ ಯಾಕೆ ಆಚರಿಸಿಲ್ಲ ಎಂಬುದರ ಬಗ್ಗೆ ವಿವರಗಳನ್ನು ತರಿಸಿಕೊಂಡು ದಸರಾ ನಾಡಹಬ್ಬವನ್ನು ಆಚರಿಸದೆ ತಮ್ಮ ಆದೇಶವನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಸವಿನಯ ವಿನಂತಿ. ಬ್ಲಾಗ್ ಗಳಲ್ಲಿ ಕನ್ನಡಭಾಷೆಗೂ ಮಹತ್ವ ನೀಡಬೇಕಾಗಿ ಕೋರಿಕೆ.
ReplyDeleteಕಾಸರಗೋಡಿನ ಕನ್ನಡಶಾಲೆಗಳ ಶಿಕ್ಷಕ ಬಂಧುಗಳಲ್ಲಿ ಒಂದು ವಿನಂತಿ:
ReplyDeleteಇತ್ತೀಚೆಗೆ ನಾನು ಮಂಗಳೂರು ಸಮೀಪದ ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿ-2014 ಎಂಬ ರಾಜ್ಯಮಟ್ಟದ ಕನ್ನಡ ಸಾಹಿತ್ಯಕ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಪ್ರತಿವರ್ಷ ನಡೆಯುತ್ತಿರುವ ಈ ಸಮ್ಮೇಳನದ ಬಗ್ಗೆ ಹಲವರಿಗೆ ತಿಳಿದಿರಬಹುದು. ತಿಳಿಯದವರಿಗಾಗಿ ಒಂದು ಪುಟ್ಟ ಪರಿಚಯವನ್ನೊದಗಿಸಿದ (ವಿಕಿಪೀಡಿಯಾದಿಂದ)ಬಳಿಕ ಉದ್ದೇಶಿಸಿದ ವಿಚಾರವನ್ನು ಮುಂದಿಡುತ್ತೇನೆ.
ಕಿರು ಪರಿಚಯ:ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ನಡೆಸಲ್ಪಡುತ್ತಿರುವ ಕನ್ನಡ ಸಾಹಿತ್ಯಿಕ ಸೇವೆ "ಆಳ್ವಾಸ್ ನುಡಿಸಿರಿ"ಆಳ್ವಾಸ್ ಎಜುಕೇಷನ್ ಫೌಂಡೇಶನ್ ಆಶ್ರಯದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರ ಮುಂದಾಳತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ(೨೦೦೪)ಆಳ್ವಾಸ್ ಶಿಕ್ಷಣ ಸಂಸ್ಥೆ ಯಾವುದೇ ಸರಕಾರಿ ನೆರವನ್ನು ಪಡೆಯದೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನುಡಿಸಿರಿಯನ್ನು ಆಯೋಜಿಸುತ್ತಾ ಬಂದಿದ್ದು, ಸಮಯಪ್ರಜ್ಞೆ, ವ್ಯವಸ್ಥೆ, ಶಿಸ್ತುಬದ್ಧ ಕಾರ್ಯಕ್ರಮ ಸಂಯೋಜನೆಗಳ ಮೂಲಕ ಕನ್ನಡಿಗರಿಂದ "ಮಾದರಿ ಸಮ್ಮೇಳನ" ಎಂಬ ಪ್ರಶಂಸೆಯನ್ನು ಪಡೆಯುತ್ತಾ ಬಂದಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್-’ ಜನವರಿಯಲ್ಲಿ ಮಿಜಾರಿನಲ್ಲಿರುವ ಶೋಭಾವನದಲ್ಲಿ ಕಳೆದ ಇಪ್ಪತ್ಮೂರು ವರ್ಷಗಳಿಂದ ನಡೆಯುತ್ತದೆ. ಕಳೆದ ವರ್ಷ 'ಆಳ್ವಾಸ್ ವಿಶ್ವನುಡಿಸಿರಿ- ವಿರಾಸತ್ 'ನಡೆದಿತ್ತು. ಸಂಪರ್ಕ.ಆಳ್ವಾಸ್ ನುಡಿಸಿರಿಯ ವೆಬ್ ತಾಣ- ಆಳ್ವಾಸ್ ನುಡಿಸಿರಿ- www.alvasnudisiri.com ನೋಡಿ.
ಉದ್ದೇಶಿತ ವಿಚಾರ: ನಮ್ಮ ಪಕ್ಕದ ಜಿಲ್ಲೆಯಲ್ಲಿ ಪ್ರತಿವರ್ಷ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ನಮ್ಮ ಕನ್ನಡಶಾಲೆಯ ಮಕ್ಕಳು ಭಾಗವಹಿಸುವುದು ಅತಿ ಅಗತ್ಯ ಎಂದು ನನಗೆ ತೋರಿತು. ಅಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದ ಶಾಲಾಮಕ್ಕಳನ್ನು ಕಂಡಾಗ ಕಾಸರಗೋಡಿನ ಕನ್ನಡಶಾಲೆಗಳ ಮಕ್ಕಳು ಭಾಗವಹಿಸದಿದ್ದರೆ ಅದು ಅವರಿಗಾಗುವ ಸಾಂಸ್ಕೃತಿಕ ನಷ್ಟ ಎಂದು ಅನಿಸಿತು. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಯೋಗ್ಯವಾದ ಸ್ಥಳ/ ಸಮಯ ಆಳ್ವಾಸ್ ನುಡಿಸಿರಿ. ಶೈಕ್ಷಣಿಕ ಪ್ರವಾಸದ ಹೆಸರಿನಲ್ಲಿ ಯಾವುದೋ ವಾಟರ್ ಪಾರ್ಕಿಗೆ ಮೋಜಿನ ಪ್ರವಾಸ ಕೈಗೊಳ್ಳುವುದಕ್ಕಿಂತ ಸಮೀಪದ ಮೂಡಬಿದ್ರೆಗೆ ಪ್ರವಾಸ ಹೋದರೆ ಮೋಜೂ ದೊರೆಯಬಹುದು, ಸಾಂಸ್ಕೃತಿಕ ಭಾಷಿಕ ಸಾಹಿತ್ಯಕ ಶೈಕ್ಷಣಿಕ ತಿಳುವಳಿಕೆಯೂ ಅಭಿಮಾನವೂ ಹೆಚ್ಚಬಹುದು. ಮೂರುದಿನಗಳ ಕಾಲ ನಡೆಯುವ ನುಡಿಸಿರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿಧಿ ಶುಲ್ಕವಿಲ್ಲ, ಹಿರಿಯರಿಗೆ ಕೇವಲ ನೂರು ರೂ ಪ್ರತಿನಿಧಿ ಶುಲ್ಕ. ಮೂರುದಿನ ಔತಣಸಮಾನ ಭೋಜನ, ಉತ್ತಮ ವಸತಿ ಸೌಕರ್ಯ ಉಚಿತ. ಮೂಡಬಿದಿರೆಯಲ್ಲಿ ಸಾವಿರಕಂಬದ ಬಸದಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ. ಬೋಟಿಂಗ್ ಅವಕಾಶವಿದೆ. ಮಂಗಳೂರು,ಕಾರ್ಕಳ,ಉಡುಪಿ, ಧರ್ಮಸ್ಥಳ ಮೊದಲಾದ ಸ್ಥಳಗಳನ್ನೂ ಬೇಕಾದರೆ ಪ್ರವಾಸದ ಪಟ್ಟಿಯಲ್ಲಿ ಸೇರಿಸಬಹುದು. ಕಾಸರಗೋಡಿನಿಂದ ಮಂಗಳೂರು ಮೂಡಬಿದಿರೆಗೆ ಬೇಕಾದಷ್ಟು ಬಸ್ಸುಗಳಿವೆ. ಒಂದೇದಿನದ ಪ್ರವಾಸವನ್ನೂ ಆಯೋಜಿಸಬಹುದು. ನುಡಿಸಿರಿಯಲ್ಲಿ ಕೇವಲ ಸಾಹಿತ್ಯಕ ಕಾರ್ಯಕ್ರಮಗಳು ಮಾತ್ರವಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧರಾಜ್ಯಗಳ ಶ್ರೇಷ್ಠಕಲಾವಿದರಿಂದ ನೃತ್ಯ, ಸಂಗೀತ, ನಾಟಕ, ಯಕ್ಷಗಾನ ಮೊದಲಾದ ಕಲಾವೈವಿಧ್ಯ, ಹೇರಳ ಪುಸ್ತಕಗಳಿಂದ ಕೂಡಿದ ಮಳಿಗೆಗಳು, ಕರಕುಶಲವಸ್ತುಗಳು, ವ್ಯಾಪಾರಮಳಿಗೆಗಳು, ವಸ್ತುಪ್ರದರ್ಶನ, ಕೃಷಿಪ್ರದರ್ಶನ, ಸಂತೆ, (ಈ ಬಾರಿ ತುಳು,ಕೊಂಕಣಿ, ಬ್ಯಾರಿ ಸಿರಿಗಳು ಕೂಡ ಇದ್ದವು) ಹೀಗೆ ಶೈಕ್ಷಣಿಕ ಜ್ಞಾನಾಭಿವೃಧ್ಧಿಗೂ, ಮನರಂಜನೆಗೂ ಹೇರಳ ಅವಕಾಶವಿದೆ. ಆಳ್ವಾಸ್ ನುಡಿಸಿರಿಯಲ್ಲಿ ಯಾವುದೇ ಅವ್ಯವಸ್ಥೆಯನ್ನು ಕಾಣಲು ಸಾಧ್ಯವಿಲ್ಲ. ವಸತಿ, ಭೋಜನ, ಕಾರ್ಯಕ್ರಮ ವೀಕ್ಷಣೆ ಎಲ್ಲವೂ ಸುಲಭ, ಸುಗಮ. ಇದು ನನ್ನ ಅನುಭವ.ಮುಂದಿನ ನುಡಿಸಿರಿ ಸಮ್ಮೇಳನಗಳಿಗೆ(ಸಾಮಾನ್ಯವಾಗಿ ನವೆಂಬರ್-ಜನವರಿಯಲ್ಲಿ ನಡೆಯುತ್ತದೆ) ನಮ್ಮ ಕನ್ನಡಶಾಲೆಗಳಿಂದ ಎಲ್ಲ ಮಕ್ಕಳನ್ನು ಕರೆದೊಯ್ಯಲು ಸಾಧ್ಯವಾಗದಿದ್ದರೂ ಸಾಹಿತ್ಯ ಕಲಾಭಿರುಚಿಯಿರುವ ಕೆಲವು ಮಕ್ಕಳನ್ನಾದರೂ ಶಿಕ್ಷಕರು ಕರೆದೊಯ್ದರೆ ಒಳ್ಳೆಯದು.
ನಾನಿದನ್ನು ನುಡಿಸಿರಿಯ ಪ್ರಚಾರಕ್ಕಾಗಿಯೋ ಜಾಹೀರಾತಿಗಾಗಿಯೋ ಹೇಳುತ್ತಲ್ಲ. ನಮ್ಮ ಕಾಸರಗೋಡಿನ ಪೇಟೆ ಪಟ್ಟಣಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಹೆಚ್ಚಿಸುವುದರ ಬದಲು ಕೀಳರಿಮೆ ಹುಟ್ಟಿಸುವ ವಾತಾವರಣ ಕಂಡುಬರುತ್ತದೆ. ಮುಂದಿನ ಕನ್ನಡಿಗ ಜನಾಂಗವಾದ ಕಾಸರಗೋಡಿನ ಕನ್ನಡಮಕ್ಕಳಲ್ಲಿ ಭಾಷಾಭಿಮಾನ, ಸಾಂಸ್ಕೃತಿಕ ಪ್ರೀತಿ, ಸಾಹಿತ್ಯಕ ಅರಿವು, ಶೈಕ್ಷಣಿಕ ಜ್ಞಾನ ಹೆಚ್ಚಲು ನುಡಿಸಿರಿಯಂತಹ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವುದು ಅಗತ್ಯ. ಭಾಗವಹಿಸುವಂತೆ ಶಿಕ್ಷಕರು, ಪೋಷಕರು ಪ್ರೇರೇಪಿಸಬೇಕು. ಇಲ್ಲವಾದರೆ ಅದು ನಮ್ಮ ಮಕ್ಕಳಿಗೆ ನಷ್ಟ, ನಮಗೆ ನಷ್ಟ, ಕಾಸರಗೋಡಿನ ಕನ್ನಡಕ್ಕೆ ಆಗುವ ನಷ್ಟ.ನಮ್ಮ ವಿದ್ಯಾಧಿಕಾರಿಗಳೂ ನನ್ನ ಈ ಸಲಹೆಯನ್ನು ಪರಿಶೀಲಿಸಬೇಕಾಗಿ ವಿನಮ್ರ ವಿನಂತಿ.
hi
ReplyDeleteKasaragod Education Officially Started website called www.kasaragodeducation.com/.
ReplyDelete